ಬೇಲೂರು : ನರಹಂತಕ ಕರಡಿ ಹೆಸರಿನ ಒಂಟಿ ಸಲಗ ದಾಳಿಗೆ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬೊಮ್ಮಡಿಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ದೇವರಾಜು (58) ಗಾಯಾಳು.
ರೈತ ದೇವರಾಜು ಅವರು ಶನಿವಾರ ಸಂಜೆ ಜಮೀನಿನ ಕೆಲಸ ಮುಗಿಸಿಕೊಂಡು ಜಾನುವಾರುಗಳೊಂದಿಗೆ ಮನೆಗೆ ಬರುತ್ತಿದ್ದ ವೇಳೆ ಏಕಾಏಕಿ ಕರಡಿ ಹೆಸರಿನ ಕಾಡಾನೆ ದಾಳಿ ಮಾಡಿದೆ. ತಪ್ಪಿಸಿಕೊಳ್ಳಲು ಯತ್ನಿಸಿದ ರೈತನನ್ನು ಸೊಂಡಲಿನಿAದ ಎಸೆದ ಹಿದು ಎಸೆದಿದೆ. ನಂತರ ದೇವರಾಜುನನ್ನು ಕಾಲಿನಿಂದ ತುಳಿಯಲು ಯತ್ನಿಸಿದಾಗ ಕಿವಿ ತುಂಡಾಗಿದ್ದು, ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದಾರೆ.
0 Comments