ಹಾಸನ: ರಾಜಕಾರಣದಲ್ಲಿ ಕುಟುಂಬಸ್ಥರ ಹಸ್ತಕ್ಷೇಪ ಮಾಮೂಲಿ ಆಗಿಬಿಟ್ಟಿದೆ. ಎಲ್ಲಾ ಪಾರ್ಟಿಯಲ್ಲೂ ಸಂಬಂಧಿಕರಿಗೆ ಟಿಕೆಟ್ ಕೊಟ್ಟಿದ್ದಾರೆ, ಕಾಂಗ್ರೆಸ್‌ನಲ್ಲಿ ಕೊಟ್ಟಿದ್ದಕ್ಕೆ ಏಕೆ ಆಕ್ಷೇಪಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಾವೇನು ಬಿಜೆಪಿಯವರನ್ನು ಆಕ್ಷೇಪಣೆ ಮಾಡ್ತೀವಾ.
ಯಡಿಯೂರಪ್ಪ ಅವರು ಬಿಜೆಪಿಯ ರಾಷ್ಟ್ರಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವ ಕಮಿಟಿಯಲ್ಲಿ ಇದ್ದಾರೆ.
ಅವರ ಮಗ ಇಲ್ಲಿ ರಾಜ್ಯಾಧ್ಯಕ್ಷರು, ಅದನ್ನು ಹೆಚ್ಚು ಮಹತ್ವ ಕೊಟ್ಟು ಟೀಕೆ ಮಾಡಲು ಹೋಗಲ್ಲ.
ಜನರು ಯಾರ ಪರ ಇದ್ದಾರೆ ಎನ್ನುವುದನ್ನು ತಿಳಿದುಕೊಂಡು ಟಿಕೆಟ್ ಕೊಟ್ಟಿದ್ದಾರೆ. ಅದನ್ನು ಟೀಕೆ ಮಾಡುವುದನ್ನು ಸರಿಯಲ್ಲ ಎಂದರು.
ಮಾಜಿ ಶಾಸಕ ಪ್ರೀತಂಗೌಡರು ಪ್ರಬುದ್ಧ ರಾಜಕಾರಣಿ.
ಅವರು ಕೂಡ ಶಾಸಕರಾಗಿ ಹೋರಾಟದಲ್ಲಿ ಬಂದವರು. ಅವರು, ಅವರ ಸ್ಥಳೀಯ ರಾಜಕಾರಣದಲ್ಲಿ ಅಳಿವು, ಉಳಿವಿನ ಪ್ರಶ್ನೆ ಇರುತ್ತದೆ.
ಅವರು ಉತ್ತಮವಾದ ನಿರ್ಧಾರ ತೆಗೆದುಕೊಳ್ತಾರೆ ಎಂಬುದು ನಮ್ಮ ನಿರೀಕ್ಷೆ. ಅದರ ಲಾಭ ಕಾಂಗ್ರೆಸ್‌ಗೆ ಆಗುತ್ತಾ ಎಂಬುದನ್ನು ಕಾದು ನೋಡಬೇಕು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ ವಿರುದ್ಧ ಚುನಾವಣಾ ಆಯೋಗಕ್ಕೆ ಮ
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರ ವರ್ಗಾವಣೆಗೆ ಆಗ್ರಹಿಸಿ ಮಾಜಿ ಪ್ರಧಾನಿ ದೇವೇಗೌಡರು, ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ ಸಚಿವರು,
ಪತ್ರ ಬರೆಯುವುದು ಅವರಿಗೆ ಬಿಟ್ಟದ್ದು. ಆದರೆ ಆರೋಪಗಳನ್ನು ಮಾಡ್ತಾರಲ್ಲ ಅದನ್ನು ಖಂಡಿಸುತ್ತೇನೆ.
ಸರ್ಕಾರಿ ನೌಕರರು ಸದಾಭಿಪ್ರಾಯ ಹೊಂದಿರುತ್ತಾರೆ.
ಒಂದು ಪಕ್ಷದ ಬಗ್ಗೆ ಒಬ್ಬೊಬ್ಬರು ಅಭಿಪ್ರಾಯ ಇಟ್ಟುಕೊಂಡಿರುತ್ತಾರೆ. ಆದರೆ ಒಬ್ಬ ಅಧಿಕಾರಿ ಮೇಲೆ ಸುಳ್ಳು ಆರೋಪ ಮಾಡಿರುವುದನ್ನು ಖಂಡಿಸುತ್ತೇನೆ.
ಸತ್ಯಾಂಶ ಇದ್ದರೆ ಬೇರೆ ವಿಚಾರ. ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಂದಾಗ ನಮ್ಮ ಸರ್ಕಾರ ಈ ರೀತಿ ಯೋಜನೆಗಳನ್ನು ತಂದಿದೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪು ಏನಿದೆ.
ಇವರು ಪ್ರಧಾನಮಂತ್ರಿ, ಮುಖ್ಯಮಂತ್ರಿ ಇದ್ದಾಗ, ಯಾವ ಜಿಲ್ಲೆಗೆ ಹೋದರು ಅಲ್ಲಿನ ಜಿಲ್ಲಾಧಿಕಾರಿಗಳು ನಮ್ಮ ಸರ್ಕಾರ ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಪತ್ರದಲ್ಲಿ ಬರೆದಿರುವ ಆರೋಪಗಳು ಸತ್ಯಕ್ಕೆ ದೂರುವಾದವು. ವಿನಾಕಾರಣ ಬಡವರಪರ ಕೆಲಸ ಮಾಡುವ ಒಬ್ಬ ಅಧಿಕಾರಿಯ ಮೇಲೆ ಆರೋಪ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
0 Comments