ಹಾಸನ: ಲೋಕಸಭೆ ಚುನಾವಣೆಗಾಗಿ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಆರ್ ಎಸ್ ಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಐನೆಟ್ ವಿಜಿ ಅವರ ಇಂಟರ್ ನೆಟ್ ಕೆಫೆ ಮೇಲೆ ಕೆಲ ಕಿಡಿಗೇಡಿಗಳು ಏಕಾಏಕಿ ದಾಳಿ ನಡೆಸಿ ಸಾಮಾಗ್ರಿಗಳನ್ನೆಲ್ಲ ಪುಡಿ ಪುಡಿ ಮಾಡಿ ವಿಜಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಅಪರಿಚಿತ ನಂಬರ್ ನಿಂದ ಕೆಲವರಿಗೆ ವಾಟ್ಸ್ ಆಪ್ ಸಂದೇಶ ರವಾನೆ ಆಗುತ್ತಿದ್ದು, ಅದರ ವಿವರ ಇಲ್ಲಿದೆ ನೋಡಿ.
ಅಣ್ಣ ನನ್ ಮನಸ್ಸಿಗೆ ಬಹಳ ನೋವಾಗಿದೆ. ಈ ಮನುಷ್ಯ ಈ ರೀತಿ ಮಾಡಿ ಸಂಘದ ಹೆಸರು ಹೇಳಿಕೊಂಡು ಹಣ ಮಾಡಿಕೊಂಡು, ಮನೆ ಕಟ್ಟಿ ಐಷಾರಾಮಿ ಜೀವನ ಮಾಡೋದು... ನಮ್ಮಂತಹ ಕಾರ್ಯಕರ್ತರು ಇವರನ್ನು ದೇವರು ಅನ್ಕೊಂಡು ಗುರುವಿನ ಸ್ಥಾನದಲ್ಲಿಡೋದು...
ಆದರೆ ಇವರು ಮಾಡೋದು ಇಂತಹ ಹ***** ಕೆಲಸ...
ವಿಜಿ ಹಾಗೂ ಅವನ ಗುಂಪಿನಲ್ಲಿರುವವರು ಸಂಘದ ಯಾವ ನಿಷ್ಠಾವಂತ ಕಾರ್ಯಕರ್ತರನ್ನು ಸಂಘದಲ್ಲಿ ಉಳಿಸಿಲ್ಲ ದಯವಿಟ್ಟು ಸಂಘ ಉಳಿಬೇಕು ಸಂಘದ ಕಾರ್ಯಕರ್ತರು ಬೆಳಿಬೇಕು ಅಂದ್ರೆ ದಯವಿಟ್ಟು ಇವರನ್ನು ಸಂಘದಿಂದ ದೂರ ಇಡಬೇಕು...
ಬೇಲೂರು ಹುಲ್ಲಳ್ಳಿ ಸುರೇಶಣ್ಣ ಹಾಗೂ ಹಾಸನದ ಪ್ರೀತಮಣ್ಣ ಅವರ ಬಗ್ಗೆ ಈ ಮಟ್ಟದ ಪಿತೂರಿ ನಡೆದಿದೆ ಅಂದ್ರೆ ಇವರು ತು....
ಹಾಸನ ಹಿಂದುತ್ವದ ಭದ್ರಕೋಟೆ ಆಗುತ್ತೆ ಅಂತ ಪ್ರೀತಂ ಗೌಡ್ರ ಕಾರ್ಯವೈಖರಿ ಹಾಗೂ ಹುಲ್ಲಳ್ಳಿ ಸುರೇಶಣ್ಣ ಅವರ ಕಾರ್ಯವೈಕರಿ ನೋಡಿ ನಾವೆಲ್ಲ ಎದೆ ಎತ್ತಿ ಓಡಾಡೋ ಸ್ಥಿತಿ ನಿರ್ಮಾಣ ಆಗಿತ್ತು.. ಇಂತಹ ಮಿರ್ಸಾಧಿಕ್ ಬುದ್ಧಿಯುಳ್ಳ ಸೈಕೋ ಪಾತ್ಗಳನ್ನ ದಯವಿಟ್ಟು ಸಂಘದಿಂದ ದೂರ ಮಾಡಿ ಸಂಸ್ಕಾರವಂತ ಹಿರಿಯ ಸಂಘದ ಕಾರ್ಯಕರ್ತರನ್ನು ಮತ್ತೆ ಸಂಘದೋಳಕ್ಕೆ ಕರೆ ತರಬೇಕು..
*ಇಂತಿ ಮನನೊಂದ ಬಿಜೆಪಿ ಕಾರ್ಯಕರ್ತ*
0 Comments