ನೌಕರರೇ ಏನಿದು ನಿಮ್ಮ ವರಸೆಅಧಿಕೃತವಾಗಿ ಕಾಂಗ್ರೆಸ್ ಸೇರಿದ ಸರ್ಕಾರಿ ಉದ್ಯೋಗಿ


ಹಾಸನ: ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಸರ್ಕಾರಿ ಉದ್ಯೋಗದಲ್ಲಿರುವವರು ಯಾವುದೇ ಒಂದು ರಾಜಕೀಯ ಪಕ್ಷದ ಪರ ಗುರುತಿಸಿಕೊಳ್ಳುವಂತಿಲ್ಲ. ಆದರೆ ಹಾಸನದಲ್ಲಿ ಸರ್ಕಾರಿ ಸಂಬಳ ಪಡೆದು ರಾಜಕೀಯ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. 
ಆಲೂರು ತಾಲ್ಲೂಕು ಕಣತೂರು ಗ್ರಾಮದ ವೃತ್ತ ಸಹಾಯಕ ನಾಗೇಶ ಅವರು ಇಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಆಗಿರುವುದಲ್ಲದೆ ಮತಯಾಚನೆ ಮಾಡಿದ್ದಾರೆ. 
ನಾಗೇಶ್ ಪತ್ನಿ ಕಲಾವತಿ ಕಣತೂರು ಗ್ರಾಮ ಪಂಚಾಯಿತಿ ಸದಸ್ಯೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 
ಪ್ರೀತಂ ಗೌಡರ ಪರ ವಾಟ್ಸಾಪ್ ಸಂದೇಶ ರವಾನಿಸಿದ ಆರೋಪದ ಹಿನ್ನಲೆ ಡಿಡಿಪಿಐ ಕಚೇರಿಯ ಎಫ್ ಡಿಎ ಮಂಜುನಾಥ್ ಹಾಗು ಅರಸೀಕೆರೆಯ ಮುರುಂಡಿ ತಾಂಡ್ಯದ ಸುಲೋಚನಾ ಬಾಯಿ ಎಂಬ ಅಂಗನವಾಡಿ ಕಾರ್ಯಕರ್ತೆ ಪಕ್ಷವೊಂದರ ಪರ ಭಾಷಣ ಮಾಡಿದರು ಎಂಬ ಕಾರಣಕ್ಕೆ ಜಿಲ್ಲಾ ಚುನಾವಣಾಧಿಕಾರಿ ಈಗಾಗಲೇ ಅಮಾನತು ಮಾಡಿದ್ದಾರೆ. ತಪ್ಪಿತಸ್ಥರಿಗೆ ಸಸ್ಪೆಂಡ್ ಶಿಕ್ಷೆ ಮುಂದುವರಿದಿದ್ದರೂ ನೌಕರರು ಮಾತ್ರ ತಮ್ಮ ವರಸೆ ಬದಲಿಸುತ್ತಿಲ್ಲ.

Post a Comment

0 Comments