ಐನೆಟ್ ವಿಜಿ ಮೇಲೆ ಹಲ್ಲೆ ಪ್ರಕರಣ ಐವರ ಬಂಧನ, ಬಿಡುಗಡೆ

ಹಾಸನ: ಆರ್ ಎಸ್ ಎಸ್ ಕಾರ್ಯಕರ್ತ ಐನೆಟ್ ವಿಜಯ್ ಕುಮಾರ್ ಮೇಲೆ ನಿನ್ನೆ ನಡೆದ ಹಲ್ಲೆ ಪ್ರಕರಣ ಸಂಬಂಧ ಐವರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ. ಹಲ್ಲೆಗೊಳಗಾದ ಆರ್.ಎಸ್.ಎಸ್‌. ಸ್ವಯಂ ಸೇವಕ ವಿಜಯ್ ದೂರು ಆಧರಿಸಿ ಸುರೇಶ್, ಕಿರಣ್, ಮೋಹನ್, ಅಭಿಷೇಕ್, ಪವನ್ ಎಂಬವರನ್ನು ಶುಕ್ರವಾರ ರಾತ್ರಿ ‌ಪೊಲೀಸರು ಬಂಧಿಸಿದ್ದರು.
ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಎದುರು ರಾತ್ರಿಯೇ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಐವರು ಆರೋಪಿಗಳಿಗೆ ಜಾಮೀನು ನೀಡಿದರು.
ಹಲ್ಲೆಯಲ್ಲಿ ಗಾಯಗೊಂಡ ವಿಜಯ್ ಕುಮಾರ್, ಪ್ರಮೋದ್ ಹಾಗೂ ಸಂದೇಶ್ ಹಿಮ್ಸ್‌ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Post a Comment

0 Comments