ಹಾಸನ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ನೂತನ ಸರ್ಕಾರವೂ ರಚನೆಯಾಗಿದೆ. ಆದರೆ ಹಾಸನ ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಸೋಲಿನ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಹಾಸನದಲ್ಲಿ ಕಾಂಗ್ರೆಸ್ ಗೆಲುವಿಗೆ ಭಾರಿ ಸದ್ದು ಮಾಡಿದ್ದ ಪೆನ್ ಡ್ರೈವ್ ಪರಿಣಾಮ ಬೀರಿಲ್ಲ ಎಂದು ಕಾಂಗ್ರೆಸ್ ನಾಯಕರು ವಾದಿಸಿದರೆ ನಮ್ಮ ಸೋಲಿಗೆ ಪೆನ್ ಡ್ರೈವ್ ಕಾರಣ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣ ಇಲ್ಲದಿದ್ದರೆ ಪ್ರಜ್ವಲ್ ರೇವಣ್ಣ ಗೆಲ್ಲುತ್ತಿದ್ದರು. ಅದರಿಂದ ನಮಗೆ ಹಿನ್ನಡೆ ಆಯಿತು. ಸೋಲಿನ ಕುರಿತು ಚರ್ಚಿಸಲು ಶೀಘ್ರ ಆತ್ಮಾವಲೋಕನಾ ಸಭೆ ನಡೆಸುತ್ತೇವೆ ಎಂದರು.
ಮಂಡ್ಯ ಸಂಸದರಾಗಿ ಆಯ್ಕೆಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ನಿನ್ನೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಅವರ ಜೊತೆ ರಾಜ್ಯದ ನಾಲ್ವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ. ರೈತರ ಸಾಲಮನ್ನಾ ಮಾಡಿರುವ, ರೈತರ ಧ್ವನಿಯಾಗಿರುವವರು ಎಚ್.ಡಿ.ಕುಮಾರಸ್ವಾಮಿ. ಹಾಗಾಗಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಖಾತೆ ಕೊಡಬೇಕು ಎಂದು ಆಗ್ರಹಿಸಿದರು.
0 Comments