ಹಾಸನ: ಹಾಸನದಲ್ಲಿ ಕಾಂಗ್ರೆಸ್ ಗೆಲುವಿನ ಸಂಭ್ರಮದಲ್ಲಿರುವ ಕಾಂಗ್ರೆಸ್ ನಾಯಕರು ಒಬ್ಬೊಬ್ಬರಾಗಿ ಇಂಜಿನಿಯರಿಂಗ್ ಕಾಲೇಜಿನತ್ತ ಬರುತ್ತಿದ್ದಾರೆ. ಈ ವೇಳೆ ಶಾಸಕ ಕೆ.ಎಂ.ಶಿವಲಿಗೇಗೌಡ ಅವರು ಸುದ್ದಿಗಾರರೊಂದಿಗೆ ಲೋಕಾಭಿರಾಮರಾಗಿ ಮಾತನಾಡಿದರು. ಅರಸೀಕೆರೆ ಕ್ಷೇತ್ರದಲ್ಲಿ ನಮಗೆ ಕಡಿಮೆ ಲೀಡ್ ಬಂದಿದೆ. ಮೋದಿಗೆ ಓಟ್ ಹಾಕ್ತಿವಿ ಅಂತ ಜನರೇ ಹೇಳಿದ್ರು. ಇನ್ನು ಐದಾರು ಸಾವಿರ ಓಟ ನಮಗೆ ಬರಬೇಕಿತ್ತು. ಆದ್ರೂ ಹಾಸನದಲ್ಲಿ ಗೆದ್ದಿದಿವಿ ತುಂಬಾ ಖುಷಿ ಆಗಿದೆ ಎಂದರು.
ದೆಹಲಿಯಲ್ಲಿ ಯಾವ ಸರ್ಕಾರ ಬರುತ್ತೆ ಗೊತ್ತಿಲ್ಲ. ದೆಹಲಿ ನಮಗೆ ದೂರ ಇದೆ ಅದೆಲ್ಲ ಗೊತ್ತಿಲ್ಲ ಎಂದು ಮುಗುಳ್ನಗೆ ಬೀರಿದರು.
0 Comments