ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹರಿದ ಕಾರುಒಬ್ಬ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ



ಹಾಸನ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಕಾರು ಹರಿಸಿ ಹತ್ಯೆಗೈದಿರುವ ಘಟನೆ ತಾಲ್ಲೂಕಿನ ದುದ್ದ ಹೋಬಳಿ ಮಾಯಸಂದ್ರ ಸರ್ಕಲ್ ನಲ್ಲಿ ಕಳೆದ ರಾತ್ರಿ ನಡೆದಿದೆ.
ಗ್ರಾಮದ ಡೈರಿಯಲ್ಲಿ ಹಾಲು ತೂಕ ಹಾಕುವ ವಿಚಾರಕ್ಕೆ ಧರ್ಮ ಹಾಗು ಮಂಜುನಾಥ್ ನಡುವೆ ಗಲಾಟೆ ನಡೆದಿದ್ದು, ಅಣ್ಣಪ್ಪ (68) ಎಂಬುವರು ಸಾವಿಗೀಡಾಗಿದ್ದಾರೆ.
ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ನಂತರ ಮಂಜುನಾಥ್ ಹಾಗೂ ಅಣ್ಣಪ್ಪ ಕಾಲ್ನಡಿಗೆಯಲ್ಲಿ ಮನೆಗೆ ತೆರಳುತ್ತಿದ್ದಾಗ ಹಿಂದಿನಿಂದ ಕಾರಿನಲ್ಲಿ ಬಂದ ಧರ್ಮ ಗುದ್ದಿಸಿದ್ದಾನೆ. ಅಣ್ಣಪ್ಪ ಸ್ಥಳದಲ್ಲೇ ಮೃತಪಟ್ಟರೆ ಮಂಜುನಾಥ್ ಅವರ ಕಾಲು ಮುರಿದಿದೆ. ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments