ಪ್ರಿಯಕರನೊಂದಿಗೆ ಓಡಿ ಹೋಗಲು ಗಂಡನಿಗೆ ಘೋರ ಶಿಕ್ಷೆ

ಪ್ರಿಯಕರನೊಂದಿಗೆ ಓಡಿ ಹೋಗಲು ಗಂಡನಿಗೆ ಘೋರ ಶಿಕ್ಷೆ





ಬೇಲೂರು: ಗಂಡನಿಗೆ ಮತ್ತು ಬರಿಸುವ ಪಾನಕ ಕುಡಿಸಿ ಮಲಗಿಸಿದ ಹೆಂಡತಿ ಮನೆಯಲ್ಲಿದ್ದ 5 ಲಕ್ಷ ರೂ. ನಗದು ಹಾಗು 250 ಗ್ರಾಂ ಚಿನ್ನಾಭರಣದೊಂದಿಗೆ ಪ್ರಿಯಕರನೊಂದಿಗೆ ಓಡಿ ಹೋಗಿರುವ ಘಟನೆ ತಾಲ್ಲೂಕಿನ ಬಿ.ಸೋಮನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 

ಗ್ರಾಮದ ಕುಮಾರ್‌ ಎಂಬಾತನ ಹೆಂಡತಿ ಶ್ವೇತಾ ಎಂಬಾಕೆ ಅದೇ ಗ್ರಾಮದ ಪ್ರಿಯಕರ ಸಾಗರ್‌ ಎಂಬುವವನ ಜೊತೆಗೆ ಪರಾರಿಯಾಗಿದ್ದಾಳೆ. ಇಬ್ಬರೂ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿದ್ದರೂ ಕುಮಾರ್‌ ತನ್ನ ಮಗನ ಭವಿಷ್ಯದ ದೃಷ್ಟಿಯಿಂದ ಪೊಲೀಸರಿಗೆ ವಿಷಯ ತಿಳಿಸದೆ ಸುಮನಿದ್ದರು.

ಕುಮಾರ್‌ ಹಾಗು ಶ್ವೇತಾ ದಂಪತಿಗೆ 13 ವರ್ಷದ ಗಂಡು ಮಗುವಿದೆ. ವಿವಾಹವಾದ ಆರಂಭದಲ್ಲಿ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಒಂದು ವರ್ಷದ ಬಳಿಕ ವಿರಸ ಉಂಟಾಗಿತ್ತು. ಪತಿ ಕುಮಾರ್‌ ಜೊತೆಗೆ ಯಾವಾಗಲೂ ಜಗಳ ಮಾಡಿಕೊಳ್ಳುತ್ತಿದ್ದ ಶ್ವೇತಾ ಮನೆ ಬಿಟ್ಟು ಹೋಗುವುದಾಗಿ ಬೆದರಿಕೆಯೊಡ್ಡುತ್ತಿದ್ದಳು.

Post a Comment

0 Comments