ಕೆಎಂಶಿ ಆಡಿಯೋ ಕೇಸ್ ಎಸ್ಐಟಿಗೆ ವಹಿಸಿ
ಹಾಸನ: ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು ಅಂತ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಸ್ ಐಟಿ ರಚಿಸಿದ ರಾಜ್ಯ ಸರ್ಕಾರ ಶಾಸಕ ಕೆ.ಎಂ.ಶಿವಲಿಂಗೇಗೌಡ ಲೋಕಸಭೆ ಚುನಾವಣೆಯಲ್ಲಿ ಹಣದ ಹಂಚಿಕೆ ವಿಚಾರ ಕುರಿತು ತನಿಖೆ ಏಕೆ ಮಾಡುತ್ತಿಲ್ಲವೆಂದು ಬಿಜೆಪಿ ಮುಖಂಡ ದೇವರಾಜೇಗೌಡ ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶಾಸಕ ನರೇಂದ್ರ ಸ್ವಾಮಿ ಅವರು ಮುನಿರತ್ನ ಸದನದಲ್ಲಿ ಕೂರಬಾರದು ಎನ್ನುತ್ತಾರೆ. ನಾನು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಆಡಳಿತ ಪಕ್ಷಕ್ಕೂ ವಿರೋಧ ಪಕ್ಷಕ್ಕು ತನ್ನದೇಯಾದ ಹಕ್ಕುಗಳಿವೆ. ಆಡಿಯೋ ತನಿಖೆಗೆ ಎಸ್ ಐಟಿ ರಚಿಸುವುದಾದರೆ ಕೆ.ಎಂ.ಶಿವಲಿಂಗೇಗೌಡ ವಿರುದ್ದ ತನಿಖೆಗೆ ಒಪ್ಪಿಸಬೇಕಲ್ಲವೇ ಎಂದು ಆಗ್ರಹಿಸಿದರು.
ಕೆಎಂಶಿ ವಿರುದ್ಧ ಇಲ್ಲಿ ತನಕ ಕ್ರಮ ಕೈಗೊಂಡಿಲ್ಲ ಏಕೆ. ಎಸ್ ಐಟಿ ಯನ್ನು ನಿಮ್ಮ ಮನೆ ಜೀತಕ್ಕೆ ಬಳಸಿಕೊಳ್ಳುತ್ತಿದ್ದಿರಾ. ಡಿಕೆಶಿ, ಸಿಎಂ, ಕೆಎಂಶಿ ಅವರನ್ನ ಬಂಧನ ಮಾಡಬೇಕು ಎಂದು ಆಗ್ರಹಿಸಿದರು.
0 Comments