ನಡು ರಸ್ತೆಯಲ್ಲಿ ಭಯ ಹುಟ್ಟಿಸಿದ ಮಾರಾಮಾರಿ

ನಡು ರಸ್ತೆಯಲ್ಲಿ ಭಯ ಹುಟ್ಟಿಸಿದ ಮಾರಾಮಾರಿ 



ಹಾಸನ: ಕೋರ್ಟ್ ಆವರಣದಲ್ಲೇ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಕೋರ್ಟ್‌ಗೆ ವಿಚಾರಣೆಗೆಂದು ಆಗಮಿಸಿದ್ದ ಕುಟುಂಬದ ಮೇಲೆ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ನಡೆದಿದೆ.

ಅಂಕನಹಳ್ಳಿ ಗ್ರಾಮದ ದಿನೇಶ್ ಎಂಬಾತ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಕೋರ್ಟ್ ಗೇಟ್ ನಲ್ಲಿ ನಿಂತಿದ್ದವರ ಮೇಲೆ ಇಬ್ಬರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳ ಹಣೆಯಿಂದ ತೀವ್ರ ರಕ್ತ ಸೋರಿಕೆ ಆಯಿತು. ಪೊಲೀಸರು ಬರುತ್ತಿದ್ದಂತೆ ಹಲ್ಲೆ ಕೋರರು ಕಾಲ್ಕಿತ್ತರು. 

Post a Comment

0 Comments