ತಂದೆಯನ್ನು ಕೊಂದು ಹೃದಯಾಘಾತದ ಕಥೆ ಕಟ್ಟಿದ ಪಾಪಿ ಪುತ್ರ

ತಂದೆಯನ್ನು ಕೊಂದು ಹೃದಯಾಘಾತದ ಕಥೆ ಕಟ್ಟಿದ ಪಾಪಿ ಪುತ್ರ



ಹಾಸನ: ತಂದೆಯನ್ನು ಹತ್ಯೆಗೈದು ಹೃದಯಾಘಾತ ಎಂದು ನಂಬಿಸಿ ಸಾಕ್ಷ್ಯನಾಶಕ್ಕೆ ಯತ್ನಿಸಿದ್ದ ಪಾಪಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಲಿಂಗಾಪುರ ಗ್ರಾಮದ ಶಶಿಧರ್ (58) ಮೃತ ದುರ್ದೈವಿ. ಪುತ್ರ ದಿನೇಶ್ ಕೊಲೆ ಆರೋಪಿ.

ಕಂಠಪೂರ್ತಿ ಕುಡಿದು ತಂದೆ ಜೊತೆ ಜಗಳವಾಡಿದ್ದ ದಿನೇಶ್ ಕಾಲಿನಿಂದ ಜೋರಾಗಿ ಒದ್ದಿದ್ದರಿಂದ ಮನೆಯಲ್ಲೇ ಕುಸಿದು ಬಿದ್ದಿದ್ದರು. 

ಶಶಿಧರ್ ಅವರ ಪರಿಸ್ಥಿತಿ ಕಂಡು ಪತ್ನಿ ಸಹೋದರನ ಮನೆಗೆ ಹೋಗಿದ್ದರು. 

ನಂತರ ತಂದೆಗೆ ಹೃದಯಾಘಾತವಾಗಿದೆ ಎಂದು ಅರೇಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದ ದಿನೇಶ್ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದ. 

ಶಶಿಧರ್ ಸಾವಿನ ಕುರಿತು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು. ದಿನೇಶ್ ನ ತಾಯಿ ದೂರು ನೀಡಿದ ಹಿನ್ನಲೆಯಲ್ಲಿ 

ಪರಿಶೀಲಿಸಿದಾಗ ಕೊಲೆ ಮಾಡಿರುವುದು ದೃಢಪಟ್ಟಿದೆ.


Post a Comment

0 Comments