ಖಾವಿಗೆ ಕಳಂಕ ತಂದ ನಕಲಿ ಸ್ವಾಮೀಜಿಗಳು
ಅರಸೀಕೆರೆ: ಭಿಕ್ಷೆ ಕೇಳುವ ನೆಪದಲ್ಲಿ ಒಂಟಿ ಮನೆಯಲ್ಲಿ ದರೋಡೆ ಮಾಡಲು ಬಂದಿದ್ದ ನಕಲಿ ಸ್ವಾಮೀಜಿಗಳಿಬ್ಬರು ಹಾಗೂ ಮೂವರು ಸಹಚರರನ್ನು ತಾಲ್ಲೂಕಿನ ಕಣಕಟ್ಟೆ ಹೋಬಳಿ ಸೋಮಶೆಟ್ಟಿಹಳ್ಳಿ ಗ್ರಾಮಸ್ಥರು ಬಾಣಾವರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಭಾನುವಾರ ಸಂಜೆ ಗ್ರಾಮಕ್ಕೆ ಕಾವಿಧಾರಿಯಾಗಿ ಬಂದಿದ್ದು ಐವರು ತೋಟದಲ್ಲಿರುವ ದಾನಶೇಖರಪ್ಪ ಅವರ ಒಂಟಿ ಮನೆಗೆ ದಿಢೀರ್ ನುಗ್ಗಿ ನಾವು ಜೇನುಕಲ್ ಸಿದ್ದೇಶ್ವರ ಸ್ವಾಮಿ ಮಠದವರಾಗಿದ್ದು ಹೆಚ್ಚಿನ ಸಹಾಯ ಮಾಡಬೇಕು. ಇದರಿಂದ ಮಠದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಬೇಡಿಕೆಯಿಟ್ಟಿದ್ದಾರೆ. ಅವರ ನಡವಳಿಕೆ ಅನುಮಾನ ಹುಟ್ಟು ಹಾಕಿದೆ. ತಕ್ಷಣವೇ ಎಚ್ಚೆತ್ತ ಮನೆಯ ಮಹಿಳೆ ಪೋನ್ ಮೂಲಕ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ನಕಲಿ ಕಾವಿಧಾರಿಗಳು ಪರಾರಿಯಾಗಲು ಯತ್ನಿಸಿ ಕಾರು ಸಹಿತ ಸಿಕ್ಕಿಬಿದ್ದಿದ್ದು ಗೂಸಾ ತಿಂದಿದ್ದಾರೆ.
ಲಕ್ಷಾಂತರ ನಗದು ಸಹಿತ ಐವರನ್ನು ಬಾಣಾವರ ಠಾಣೆಗೆ ಒಪ್ಪಿಸಿದ್ದಾರೆ. ಕಾರಿನಲ್ಲಿ ಬಂದಿದ್ದವರು ಕಡೂರು ತಾಲ್ಲೂಕಿನ ಸಿದ್ದರಹಟ್ಟಿ ಗ್ರಾಮದವರು ಎಂದು ಗುರುತಿಸಿದ್ದು, ಪ್ಯಾಂಟ್, ಅಂಗಿ ಬದಲಿಸಿ ಕಾವಿ ಧರಿಸಿ ಭಿಕ್ಷೆ ನೆಪದಲ್ಲಿ ಮನೆಗಳಲ್ಲಿ ದರೋಡೆ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
0 Comments